ಕನ್ನಡದಲ್ಲೇ ಮಾತನಾಡಿ.
ಕನ್ನಡದಲ್ಲೇ ಮಾರಾಟಮಾಡಿ.
ಕನ್ನಡವನ್ನು ಜಗತ್ತಿಗೇ ಪರಿಚಯಿಸಿ.

ಹೊಸ ಜಗತ್ತಿಗೆ ಬೇಕು
ಹೊಸ ಭಾಷೆ; ಹೊಸ ನುಡಿಗಟ್ಟು.


ಕನ್ನಡ



ಭಾಷೆ
ಭಾರತದ ೨೨ ಅಧಿಕೃತ ಆಡಳಿತ ಭಾಷೆಗಳಲ್ಲಿ ಒಂದು. ದ್ರವಿಡ ಭಾಷಾ ಗುಂಪಿಗೆ ಸೇರಿರುವ ಕನ್ನಡಕ್ಕೆ ಸುಮಾರು ೧೦೦೦ ಕ್ಕೂ ಹೆಚ್ಚು ವರ್ಷಗಳ ಸಾಹಿತ್ಯ ಪರಂಪರೆ ಇದ್ದು ಅದನ್ನು ಕರ್ನಾಟಕ ರಾಜ್ಯದ ೩೦ ಜಿಲ್ಲೆಗಳಲ್ಲಿ, ವಿದಧ ವೈವಿಧ್ಯದಲ್ಲಿ ಬಳಸಲಾಗುತ್ತದೆ. ಕರ್ನಾಟಕದ ಹೊರಗೆ ಕೇರಳ, ಆಂದ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲೂ ಕನ್ನಡ ಅನೇಕರ ಮಾತೃಭಾಷೆಯಾಗಿದೆ. ಜಿಲ್ಲೆ-ಜಿಲ್ಲೆಗಳ ಆಹಾರ, ಪ್ರಕೃತಿ, ಸಂಸ್ಕೃತಿಗಳಲ್ಲಿ ವ್ಯತ್ಯಾಸ ಮತ್ತು ವೈವಿಧ್ಯವಿದೆ. ಐದಕ್ಕಿಂತ ಹೆಚ್ಚಿನ ಉಪಭಾಷೆಗಳನ್ನಾಡುವ ಕನ್ನಡದ ಜನರ ಅಗತ್ಯಗಳೂ ಅವರು ವಾಸಿಸುವ ಊರು, ಪಟ್ಟಣ, ನಗರಪ್ರದೇಶ, ಹಳ್ಳಿಗಳಿಗೆ ತಕ್ಕಂತೆ ವಿಭಿನ್ನವಾಗಿದೆ.
ಕನ್ನಡಿಗರನ್ನು ಕನ್ನಡದಲ್ಲೇ ತಲುಪಿ
ಗೂಗಲ್-ಕೆ.ಪಿ.ಎಂ.ಜಿ ವರದಿ, ೨೦೧೭ ತೋರಿಸಿರುವಂತೆ – ಶೇ ೬೮ಕ್ಕೂ ಹೆಚ್ಚು ಜನ ಅವರ ಮಾತೃಭಾಷೆಯಲ್ಲೇ ಮಾಹಿತಿ, ಮನೊರಂಜನೆ, ಕಲಿಕೆ, ಜ್ಞಾನಾರ್ಜನೆಯನ್ನು ಪಡೆಯಲು ಇಚ್ಛಿಸುತ್ತಾರೆ. ಅದೇ ವರದಿ ಹೇಳುವಂತೆ- ಅಂತರ್ಜಾಲಕ್ಕೆ ಸುಲಭವಾಗಿ ಹೊಂದಿಕೊಳ್ಳುವ ಕನ್ನಡಿಗರ ಪ್ರಮಾಣ ಶೇ ೭೫ರಶಷ್ಟಿದೆ. ನಿಮ್ಮ ಸೇವೆ, ಉತ್ಪನ್ನ, ಐಡಿಯಾಗಳನ್ನು ಪ್ರತಿ ಜಿಲ್ಲೆಯ, ಪ್ರತಿ ಭಾಷೆ-ಉಪಭಾಷೆಗಳನ್ನಾಡುವ ಕನ್ನಡಿಗನಿಗೂ ತಲುಪಿಸಬೇಕೇ? ಅಥವಾ ನಿಮ್ಮ ಕನ್ನಡದ, ಕರ್ನಾಟಕದ ಪ್ರಾಡಕ್ಟ್ ಅನ್ನೇ ಭಾರತದಾದ್ಯಂತ ಮಾರುಕಟ್ಟೆಗೆ ಪರಿಚಯಿಸಬೇಕೆಂದಿದ್ದೀರಾ?
ನಾವು ವರ್ಡ್-ವೈಸ್.
ನೀವು
ಭಾರತದಾದ್ಯಂತ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಬಯಸುತ್ತಿದ್ದೀರಾ?
ನಿಮ್ಮ ಉತ್ಪನ್ನ ಮತ್ತು ಸೇವೆಗಳು ಭಾರತೀಯ ಭಾಷೆಯನ್ನಾಡುವ ಪ್ರತಿಯೊಬ್ಬ ವ್ಯಕ್ತಿಗೆ ತಲುಪಬೇಕೇ?


ಸ್ಟಾರ್ಟ್ ಅಪ್?

ಎಂಟರ್-ಪ್ರೈಸ್?

ಓದುಗ/ಬರಹಗಾರ?
ನಾವು
ನಿಮ್ಮ ಬರವಣಿಗೆ-ಸಂವಹನ-ಬ್ರಾಂಡಿಂಗ್ ಅಗತ್ಯಗಳ ಅಂಗಡಿ.
ಮತ್ತು,
ಕನ್ನಡವನ್ನು ತಂತ್ರಜ್ಞಾನಕ್ಕೆ ಬೆಸೆಯುವ ಒಂದು ಸೇತುವೆ.

ಬಳಕೆದಾರನ ಭಾಷೆಯನ್ನೇ ಬಳಸಿ
ಭಾರತದ ಮೂಲೆ ಮೂಲೆ ತಲುಪಿ.
ತಂತ್ರಜ್ಞಾನಾಧಾರಿತ ಸಂಪರ್ಕ ಮತ್ತು ಸಂವಹನ ಸಾಧ್ಯತೆಗಳು ವೇಗವಾಗಿ ಬದಲಾಗುತ್ತಿವೆ.
ಭಾರತದ ಭಾಷೆಗಳನ್ನಾಡುವ ಜನರೂ ಈ ನಾಗರೀಕತೆಯ ಮಹಾ ಮುನ್ನೋಟದಲ್ಲಿ ಭಾಗಿಯಾಗಲು ಸಜ್ಜಾಗುತ್ತಿದ್ದಾರೆ. ಎದುರು ನೋಡುತ್ತಿದ್ದಾರೆ.
ಎಲ್ಲರನ್ನೂ ಒಳಗೊಳ್ಳಿ. ಎಲ್ಲರನ್ನೂ ತಲುಪಿ.

ನೀವು ಕರ್ನಾಟಕದಲ್ಲಿ ವ್ಯಾಪಾರ-ವ್ಯವಹಾರ ನಡೆಸುತ್ತಿದ್ದು, ೩೦ ಜಿಲ್ಲೆಗಳ ಕನ್ನಡಿಗರನ್ನೂ ತಲುಪಬೇಕು ಎಂಬುದು ನಿಮ್ಮ ಉದ್ದೇಶವೇ? ಹಾಗಿದ್ದರೆ, ನೀವು ನಮ್ಮನ್ನೇ ಹುಡುಕುತ್ತಿದ್ದಿರಿ. ನಮ್ಮ ಸೂಕ್ಷ್ಮ, ಬುದ್ದಿವಂತ ಬರಹಗಾರರು ನಿಮ್ಮ ಉದ್ಯಮಕ್ಕೆ ತಕ್ಕಂಥ ಭಾಷೆಯಲ್ಲಿ ಬ್ರಾಂಡ್ ಅನ್ನು ಮನೆಮನೆಗೆ ತಲುಪಿಸುತ್ತಾರೆ.
ಮಾತು ಮತ್ತು ಬರವಣಿಗೆಗಳು ಮನುಷ್ಯರ ಸಂವಹನದ, ವಿಚಾರ ವಿನಿಮಯದ ಎರಡು ಮುಖ್ಯ ದಾರಿಗಳು. ಪ್ರತಿಯೊಂದು ಸಂಸ್ಥೆ, ವ್ಯಾಪಾರವೂ ತನ್ನ ಗ್ರಾಹಕನನ್ನು ಅವಳದ್ದೇ/ಅವನದ್ದೇ/ಅವರದ್ದೇ ಭಾಷೆಗಳಲ್ಲಿ ತಲುಪಲು ಬಯಸುತ್ತಿರುತ್ತದೆ. ಜಗತ್ತಿನ ಮನುಷ್ಯರೆಲ್ಲರೂ ಭಿನ್ನರಾದರೂ ಅವರ ಅನೇಕ ಸಾಮಾಜಿಕ ಅಗತ್ಯಗಳು ಒಂದೇ ಆಗಿವೆ. ನಿಮ್ಮ ಸೇವೆ, ಉತ್ಪನ್ನ, ವಿಚಾರ ಯಾವುದೇ ಇರಲಿ – ಅದರ ಅಗತ್ಯವಿರುವವರ ಬಳಿಗೆ ತಲುಪಲು ನಾವು ಸಹಾಯ ಮಾಡುತ್ತೇವೆ.
ನಾವು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಅನೇಕ ಸೇವೆಗಳನ್ನು ಒದಗಿಸುತ್ತೇವೆ. ನಿಮ್ಮ ಸಂಸ್ಥೆಗೆ ಯಾವುದೇ ಬಗೆಯ ಭಾಷೆಗೆ ಸಂಬಂಧಪಟ್ಟ ಸಹಾಯ ಬೇಕಿದ್ದಲ್ಲಿ, ನಮ್ಮನ್ನು ಸಂಪರ್ಕಿಸಿ. ಭಾರತದ ನೆಲ, ಭೂಗೊಳ, ಸಂಸ್ಕೃತಿ, ಸಮಾಜಗಳ ದಟ್ಟ ಅರಿವು, ತಿಳುವಳಿಕೆಗಳಿರುವ ವರ್ಡ್-ವೈಸ್ ನ ಬರಹಗಾರರು ನಿಮಗೆ ಸಹಾಯಮಾಡುತ್ತಾರೆ. ಭಾರತದ ಭಾಷೆಗಳನ್ನಾಡುವ ಪ್ರತಿ ವ್ಯಕ್ತಿಗೂ ತಲುಪಿ. ಮಾತಾಡಿ. ಮಾರಾಟಮಾಡಿ.

ಕನ್ನಡ ಮತ್ತು ಭಾರತದ ೨೨ ಭಾಷೆಗಳಲ್ಲಿ ಲೇಖನ, ಪ್ರಚಾರ ಬರವಣಿಗೆ, ಸಂಶೋಧನಾತ್ಮಕ ಪ್ರಬಂಧಗಳ ಬರವಣಿಗೆ.
ವೆಬ್ಸೈಟ್ ಮತ್ತು ಆಪ್ ಗಳನ್ನು ಕನ್ನಡ ಮತ್ತು ಅದರ ಉಪಭಾಷೆಗಳಲ್ಲಿ ಮಾಡಲು ಭಾಷಾ-ಸ್ಥಳೀಕರಣ ಸೇವೆ.
ಜಾಗತಿಕ ಮಟ್ಟದ ಶೈಕ್ಷಣಿಕ ಹಾಗೂ ಮನೋರಂಜನಾತ್ಮಕ ಗೇಮಿಂಗ್ ಪ್ರಪಂಚ ನಿಮ್ಮದೇ ಕನ್ನಡದಲ್ಲಿ.
ಚಲನಚಿತ್ರ, ಕಿರುತೆರೆ, ಅಂತರ್ಜಾಲ ಮತ್ತು ಡಾಕ್ಯುಮೆಂಟರಿಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡು, ಸಾಮಾಜಿಕ ಜಾಲತಾಣ ಪ್ರಚಾರ ಬರವಣಿಗೆ.

ಅನುವಾದವೆಂದರೆ ಕೇವಲ ಒಂದು ಭಾಷೆಯ ಪದದ ಅರ್ಥವನ್ನು ಇನ್ನೊಂದು ಭಾಷೆಯಲ್ಲಿ ತಿಳಿಸುವುದಲ್ಲ. ಅದು ಒಂದು ಮೌಲ್ಯವರ್ಧನೆ. ಅದು ಮನುಷ್ಯರ ಜ್ಞಾನಾರ್ಜನೆಯ ದಿಗಂತಗಳನ್ನು ವಿಸ್ತರಿಸುವ ವಿಧಾನ ಹಾಗೂ ನಿಮ್ಮ ಐಡಿಯಾಗಳನ್ನು ಇನ್ನೂ ಮಿಲಿಯಾಂತರ ಜನರಿಗೆ ತಲುಪಿಸಲಿರುವ ದಾರಿ.
ಸುಮಾರು ೬ ಸಾವಿರ ವರ್ಷಗಳಷ್ಟು ಇತಿಹಾಸವಿರುವ ಅನುವಾದ ಒಂದು ಕಲೆ. ಎರಡು ಭಾಷೆ ಬರದವನಿಗೆ ಒಂದು ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂಬ ಮಾತಿದೆ! “ಒಳ್ಳೆಯ ಅನುವಾದ ಎಂದರೆ ಅದರಲ್ಲಿ ಎಲ್ಲವೂ ಬದಲಾಗಿಹೋದರೂ ಏನೂ ಬದಲಾಗಿರದಂತೆ ಇರುತ್ತದೆ” ಎಂದವನು ಗುಂಟೆರ್ ಗ್ರಾಸ್. ನಮ್ಮ ಅನುವಾದಗಳು ನಿಮ್ಮ ಅಗತ್ಯಕ್ಕೆ ತಕ್ಕಂತೆ ಮೆಟಾಫ್ರೇಸ್ ಹಾಗೂ ಪ್ಯಾರಫ್ರೇಸ್ ಗಳಲ್ಲಿ ಲಭ್ಯವಿರುತ್ತದೆ. ಗಣಕೀಕೃತ ಅನುವಾದ ಮತ್ತು ಸಂಪದನೆ, ಪದಶಃ ಮತ್ತು ಅರ್ಥಶಃ ಅನುವಾದಗಳಲ್ಲೂ ನಮ್ಮ ಅನುವಾದಕರು ಪರಿಣಿತರಿದ್ದಾರೆ.
ಅನೇಕ ಕಾರ್ಪೊರೇಟ್ ಸಂಸ್ಥೆಗಳೂ ಒಳಗೊಂಡಂತೆ, ಸರ್ಕಾರ, ಲಾಭೇತರ ಸಂಸ್ಥೆಗಳು ಹಾಗೂ ಕಂಪೆನಿಗಳು ನಮ್ಮ ಸೇವೆಗಳ ಪ್ರಯೋಜನ ಪಡೆದಿದ್ದಾರೆ. ನಿಮ್ಮ ಸಂಸ್ಥೆಯನ್ನು ಇನ್ನೊಂದು ಭಾಷೆಯಲ್ಲಿ ಜನರಿಗೆ ಪರಿಚಿಯಿಸಿ. ನಿಮ್ಮ್ ಬ್ರಾಂಡ್ ಅನ್ನು ಅವರಿಗೆ ಹತ್ತಿರವಾಗಿಸಿ. ನಮ್ಮ ನುರಿತ ಅನುವಾದಕರು ನಿಮ್ಮ ಎಲ್ಲ ಬಗೆಯ ತರ್ಜುಮೆಯ ಅಗತ್ಯಗಳಿಗೂ ಒದಗಿಬರುತ್ತಾರೆ. ಭಾಷೆಯೆಂಬುದು ತೊಡಕಲ್ಲ, ಅದು ಇನ್ನೊಂದು ಜಗತ್ತಿನ ಪ್ರವೇಶ.

ಗಣಕೀಕೃತ ಅನುವಾದದಿಂದ ಮೊದಲ್ಗೊಂಡು ಅಗತ್ಯಕ್ಕೆ ತಕ್ಕ ಹಾಗೆ ಅನುಭವೀ ಬರಹಗಾರರು, ಅನುವಾದಕರಿಂದ ಭಾಷಾಂತರ.
ಪ್ರದೇಶ, ಪಾತ್ರಗಳಿಗೆ ಹೊಂದುವಂತೆ ಚಲನಚಿತ್ರ ಸಂಭಾಷಣೆ-ಅನುವಾದ (subtitling).
ದೊಡ್ಡ ದತ್ತಾಂಶ ಸಂಚಯಗಳನ್ನು ಕನ್ನಡ ವ್ಯಾಕರಣಕ್ಕೆ ತಕ್ಕ ಹಾಗೆ ಮ್ಯಾಪ್ ಮಾಡುವುದು ಮತ್ತು ತಂತ್ರಾಂಶ ಅನುವಾದವನ್ನು ಉತ್ತಮಗೊಳಿಸುವುದು.
ವಿಷಯ ತಜ್ಞರು, ತರಬೇತುದಾರರು, ವಿವಿಧ ಕ್ಷೇತ್ರಗಳ ಪ್ರತಿಭಾನ್ವೀತರು ನಮ್ಮನ್ನು ಸಂಪರ್ಕಿಸಿ. ನಿಮ್ಮ ಧ್ವನಿಯನ್ನು ಭಾರತದ ಭಾಷೆ ಭಾಷೆಗಳಲ್ಲಿ ಅನುರಣಿಸಿ.

ಭಾರತದ ಜನ ಹಾಗೂ ಭಾಷೆಗಳು ಅತ್ಯಂತ ವೈವಿಧ್ಯಮಯವಾದವು. ಭಾರತೀಯರ ಅಗತ್ಯಗಳೂ ವಿಭಿನ್ನ. ನಿಮ್ಮ ಉತ್ಪನ್ನ, ಸೇವೆಗಳನ್ನು, ಉತ್ಪನ್ನ ವಿವರದಿಂದ ಮೊದಲ್ಗೊಂಡು ಆಪ್. ವೆಬ್ಸೈಟ್ ಭಾಷಾ-ಸ್ಥಳೀಕರಣದ ಮೂಲಕ ಅಸಂಖ್ಯ ಗ್ರಾಹಕರನ್ನು ತಲುಪಲು ನಾವು ಸಹಾಯ ಮಾಡುತ್ತೇವೆ.
ಒಂದು ಉತ್ಪನ್ನವು ಎಲ್ಲರಿಗೂ ಹೊಂದಿಕೆಯಾಗುವಂತಿರಬೇಕು ಎಂದೇನಿಲ್ಲ. ಅದೂ ಭೌಗೋಳಿಕವಾಗಿ, ಸಾಮಾಜಿಕವಾಗಿ, ಭಾಷೆಯ ದೃಷ್ಟಿಯಿಂದ ಊಹಾತೀತವಾಗಿ ವೈವಿಧ್ಯಮಯವಾಗಿರುವ ಭಾರತದಂತಹ ದೇಶದಲ್ಲಿ ನಿಮ್ಮ ಸೇವೆ/ಉತ್ಪನ್ನಗಳನ್ನು ಸ್ಥಳೀಯ ಜನರ ಭಾಷೆ, ಅಭಿರುಚಿ, ಅಗತ್ಯಗಳಿಗೆ ತಕ್ಕ ಹಾಗೆ ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ, ಅಧ್ಯಯನಗಳು ತೋರಿಸುವಂತೆ ಸ್ಥಳೀಯ ಭಾಷೆಯಲ್ಲಿಯೇ ಸೇವೆಗಳು ದೊರಕಿದಾಗ ಗ್ರಾಹಕ-ಹೆಚ್ಚಳಕ್ಕೂ ಕಾರಣವಾಗುತ್ತದೆ.
ನಾವು ನಿಮ್ಮ ಅಗತ್ಯಗಳಿಗೆ ತಕ್ಕಂಥ ಬರಹಗಾರರು, ಅನುವಾದಕರು, ವಿನ್ಯಾಸಕಾರರು, ವಿಷಯ ತಜ್ಞರು ಹಾಗೂ ಸ್ಥಳೀಯರನ್ನು ಬಳಸಿ ನಿಮ್ಮ ಬ್ರಾಂಡ್ ಹಾಗೂ ಉತ್ಪನ್ನಗಳನ್ನು ಭಾರತದ ಎಲ್ಲ ಮೂಲೆಗಳಿಗೂ ತಲುಪಿಸಿ. ನಿಮ್ಮ ಗ್ರಾಹಕರಿಗೆ ನಿಮ್ಮ ವಸ್ತುವಿನ ಮೌಲ್ಯವನ್ನು – ನಮ್ಮ ಸಹಾಯ, ಸೇವೆಗಳನ್ನು ಬಳಸಿಕೊಂಡು ಇನ್ನೂ ಸ್ಪಷ್ಟವಾಗಿ ಹೇಳಿ. ಇನ್ನೊಂದು ಬಗೆಯಲ್ಲಿ ಸ್ಥಳೀಯ ಮತ್ತು ಪ್ರಾದೇಶಿಕ ಪ್ರತಿಭೆಗಳು ಮಾಡುವ ಉತ್ಪನ್ನ, ಸೇವೆಗಳನ್ನೂ ಕೂಡಾ ಹೆಚ್ಚಿನ ಜನರಿಗೆ ತಲುಪಿಸಲು ವರ್ಡ್-ವೈಸ್ ನ ಸೇವೆಗಳು ಸಹಕಾರಿ.

ಆಪ್-ಗಳು (App), ಜಾಲತಾಣ (Website), ಆಟಗಳು (Gaming) ಗಳನ್ನು ಕನ್ನಡದ ಬಳಕೆದಾರರಿಗೆ ತಲುಪಿಸಿ.
ನಿಮ್ಮ ಉತ್ಪನ್ನ ಮತ್ತು ನಿಮ್ಮ ಗ್ರಾಹಕನ ಮಧ್ಯೆ ಇರುವ ಭಾಷೆಯ, ಸಂವಹನದ ಸಮಸ್ಯೆಯನ್ನು ಮೀರಿ.
ಹಳ್ಳಿ, ಹೋಬಳಿ, ತಾಲೂಕು, ಜಿಲ್ಲೆಗಳ ಜನರ ಅಗತ್ಯಗಳಿಗೆ ನಿಮ್ಮ ಸೇವೆ ಅಗತ್ಯವಿರಬಹುದು.
ನಿಮ್ಮ ರೀತಿಯಲ್ಲಿಯೇ ಯೋಚಿಸುವ ಇನ್ನೊಬ್ಬ ಬೇರೆ ರಾಜ್ಯ, ಬೇರೆ ಭಾಷೆಯಲ್ಲಿರಬಹುದು. ಕೂಡಿಕೊಳ್ಳಿ.

ಇದು ವರ್ಡ್-ವೈಸ್ ನ ಒಂದು ವಿಶಿಷ್ಟ ಸೇವೆ. ಇಲ್ಲಿಯವರೆಗೆ ನೀವು ನಿಮ್ಮ ಪದಾರ್ಥ, ಸೇವೆಗಳನ್ನು ನಿಮ್ಮ ಭಾಷೆಯ ಜನರಿಗೆ ಮಾತ್ರವೇ ಮಾರುತ್ತಿದ್ದಿರಿ. ಭಾಷೆಯ ಅಡಚಣೆ ಇದಕ್ಕೆ ಕಾರಣವಾಗಿರಬಹುದಲ್ಲವೇ? ಈಗ ನಮ್ಮ ಬಹುಭಾಷಾ ಅನುವಾದಕರ ಸಹಾಯದಿಂದ ಭಾರತದಾದ್ಯಂತ ಪಸರಿಸಿ.
ಭಾರತದಲ್ಲಿ ಅಧಿಕೃತ ಭಾಷೆಗಳ ಮಾನ್ಯತೆ ಪಡೆದಿರುವ ೨೨ ಭಾಷೆಗಳಿದ್ದರೆ, ಒಟ್ಟು ೧೨೨ ಪ್ರಮುಖ ಭಾಷೆ ಹಾಗೂ ಇತರೇ ೧೫೦೦ ಕ್ಕೂ ಅಧಿಕ ಸೊಲ್ಲುಗಳಿವೆ. ಈಗ ಡಿಜಿಟಲೀಕರಣದ ಸಹಾಯದಿಂದ ಭಾರತದ ಒಂದು ಭಾಷೆಯನ್ನಾಡುವ ವ್ಯಕ್ತಿ ಅಥವಾ ಸ್ಥಳೀಯ ಸಂಸ್ಥೆ ಸರಾಗವಾಗಿ ರಾಜ್ಯಗಳ, ಭಾಷೆಯ ಗಡಿಯನ್ನು ಮೀರಿ ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಿಕೊಳ್ಳಬಹುದು. ಚಿಕ್ಕ ಉದ್ಯಮಗಳು ನಮ್ಮ ಭಾಷೆಯ ಸಹಾಯದಿಂದ ತಮ್ಮ ವಿಸ್ತರಿಕೆಯ ಪ್ರಯತ್ನಗಳನ್ನು ಮಾಡಬಹುದು.
ಭಾರತದಲ್ಲಿ ಸುಮಾರು ೨೨ ಪ್ರತಿಶತಕ್ಕೂ ಹೆಚ್ಚು ಜನರು ಎರಡು ಭಾಷೆಗಳನ್ನಾಡುವವರು (ಪಾಲಿಗ್ಲಾಟ್). ವರ್ಡ್-ವೈಸ್ ನ ಒಂದು ವಿಷಿಷ್ಟ ಸೇವೆಯೆಂದರೆ, ನಾವು ಸುಮಾರು ೪೬೨ ಭಾಷಾಜೋಡಿಗಳಲ್ಲಿ ಅನುವಾದಗಳನ್ನು ಮಾಡುತ್ತೇವೆ. ಈ ಕೆಲಸಗಳಿಗೆ ನುರಿತ ಅನುವಾದಕರು, ಬಹುಭಾಷೆಗಳನ್ನಾಡುವ ಬರಹಗಾರರು ಹಾಗೂ ಮಾರುಕಟ್ಟೆ ಪರಿಣಿತರನ್ನು ವರ್ಡ್-ವೈಸ್ ಲಗತ್ತಿಸುತ್ತದೆ. ನಮ್ಮ ಅಂತರ್ಭಾಷಾ ಅನುವಾದಗಳು ಭಾರದದ ವೈವಿಧ್ಯಮಯ ಸಂಸ್ಕೃತಿಗಳನ್ನು ಪರಸ್ಪರ ಪರಿಚಯಿಸುವ ಮಾರುಕಟ್ಟೆಯನ್ನು ವಿಸ್ತರಿಸಲು ಸಹಾಯ ಮಾಡುವ ಸೇವೆಯಾಗಿದೆ.

೪೬೪ ಭಾಷಾ-ಜೋಡಿಗಳಲ್ಲಿ ಅನುವಾದ. ಬಹುನುಡಿಗಳನ್ನು ಮಾತನಾಡುವ ವರ್ಡ್-ವೈಸ್ ಬರಹಗಾರರ ತಂಡ.
ರಾಜ್ಯದ ಗಡಿಗಳನ್ನು ಮೀರಿ. ನಿಮ್ಮ ವಸ್ತು-ವಿಚಾರಗಳನ್ನು ತಲುಪಿಸಿ, ಮಾರಿ.
ಆಹಾರ, ಕೌಶಲ್ಯ, ಉತ್ಪನ್ನ, ಶಿಕ್ಷಣ ಎಲ್ಲವನ್ನೂ ಭಾರತದ ಭಾಷೆಗಳ ನಡುವೆ ಹಂಚಿಕೊಳ್ಳಿ; ಬೆಳೆಯಿರಿ.
ಭಾಷೆಯೇ ಒಂದು ಮೌಲ್ಯ. ನಿಮ್ಮ ಉತ್ಪನ್ನದ ಮೌಲ್ಯವರ್ಧನೆ ಮಾಡಿ.

ನಾವು ಹೊಸತಲೆಮಾರಿನ ಸಂಸ್ಥೆ. ಪ್ರಪಂಚದ ಎಲ್ಲ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಗ, ಉಪಯೋಗ ಹಾಗೂ ಕಲಿಕೆಗಳು ಭಾರತದ ಪ್ರತಿಯೊಂದು ಭಾಷೆಯನ್ನಾಡುವ ವ್ಯಕ್ತಿಗೂ ದೊರಕಬೇಕು ಎಂಬುದಷ್ಟೇ ಅಲ್ಲದೇ, ಕನ್ನಡವನ್ನು ತಾಂತ್ರಿಕವಾಗಿಯೂ ಹೆಚ್ಚು ಸಬಲಗೊಳಿಸುವ ಪ್ರಯತ್ನ ನಮ್ಮದು.
ಯುರೋಪಿನ ಭಾಷೆಗಳು ಸಹಜವಾಗಿಯೇ ಬೇಗ ತಂತ್ರಜ್ಞಾನದ ಬೆನ್ನೇರಿ ಅದರ ಹೊಸ ಸಾಧ್ಯೆತೆಗಳನ್ನು ಮೈಗೂಡಿಸಿಕೊಂಡು ಬೆಳೆದವು. ಭಾರತಕ್ಕೆ ಸ್ವತಂತ್ರ ಬರುವ ವೇಳೆಗೆ ಸ್ಟಾನ್-ಫೋರ್ಡ್ ವಿಶ್ವವಿದ್ಯಾಲಯದಲ್ಲಿ “ಸಹಜ ಭಾಷಾ ವಿಷ್ಲೇಷಣೆ” ಯ ಬಗ್ಗೆ ಸಂಶೋಧನೆಗಳು ಆರಂಭವಾಗಿದ್ದವು. ಅಪಾರ ತಿಳುವಳಿಕೆ, ಅರಿವಿನ ಸಾರವಾಗಿರುವ ಭಾರತೀಯ ಭಾಷೆಗಳನ್ನು ತಂತ್ರಜ್ಞಾನದ ಬೆಳಕಿಗೆ ಒಡ್ಡುವ ಕಾಲ ಈಗ ಬಂದಿದೆ.
ಕನ್ನಡದ ವಿವಿಧ ವರ್ಗದ, ಅಭಿರುಚಿಯ, ಆಸಕ್ತಿಗಳ ಜನರನ್ನು ತಲುಪಲು ವರ್ಡ್-ವೈಸ್ ನ ಅಧ್ಯಯನಗಳು, ವರದಿಗಳು, ದೊಡ್ಡ ಜನಾಭಿಪ್ರಾಯ ಸಂಗ್ರಹಣೆ ಮತ್ತು ವಿಶ್ಲೇಷಣೆಗಳು ನಿಮ್ಮ ಸಂಸ್ಥೆಗೆ ಸಹಾಯ ಮಾಡುತ್ತವೆ. ನಿಮ್ಮ ಉತ್ಪನ್ನಗಳು ಅವುಗಳ ಸರಿಯಾದ ಬಳಕೆದಾರರಿಗೆ ತಲುಪುವಂತೆ ಮಾಡಲು ನಮ್ಮ ಭಾಷೆ, ಬರವಣಿಗೆ, ಅನುವಾದ ಹಾಗೂ ಇತರೇ ಸೇವೆಗಳನ್ನು ಬಳಸಿಕೊಳ್ಳಿ. ನಮ್ಮ ಮಾರುಕಟ್ಟೆ ವರದಿಗಳೂ ಅತಿಚಿಕ್ಕ-ಚಿಕ್ಕ-ಮಧ್ಯಮ ಗಾತ್ರದ ಉದ್ದಿಮೆ, ವ್ಯವಹಾರಗಳಿಗೆ ವರ್ಡ್ ವೈಸ್ ಮಾರುಕಟ್ಟೆ ವರದಿಗಳು ದಿಕ್ಸೂಚಿಗಳಾಗಬಲ್ಲವು.

ವರ್ಡ್-ವೈಸ್ ವರದಿಗಳು, ಸರ್ವೇಗಳು ಮತ್ತು ಪ್ರಕಟಣೆಗಳನ್ನು ಬಳಸಿ ಸ್ಥಳೀಯ ಮಾರುಕಟ್ಟೆಯ ಬಗ್ಗೆ ಆಳವಾಗಿ ಅರಿಯಿರಿ.
ನಮ್ಮ ಅಂಕಿಂಶ ಆಧಾರಿತ ಮಾರುಕಟ್ಟೆ ಸಂಶೋಧನೆಗಳು ಹಾಗೂ ಸ್ಥಳೀಯ ಭಾಷೆ - ನುಡಿಗಟ್ಟುಗಳ ಪ್ರಚಾರ ಬರವಣಿಗೆ ಬಳಸಿ ಊರು ಊರುಗಳಿಗೆ ತಲುಪಿ.
ನಿಮ್ಮ ದತ್ತಾಂಶ, ಮಾಹಿತಿಗಳು ನಮ್ಮ ಕ್ಲೌಡ್ ಆಧಾರಿತ ಡ್ಯಾಶ್-ಬೋರ್ಡ್ ನಲ್ಲಿ ಅತ್ಯಂತ ಸುರಕ್ಷಿತ. ಬಳಕೆಯೂ ಬಲು ಸುಲಭ. ಪರೀಕ್ಷಿಸಿ.
ಅಂತರ್ಜಾಲ ಕಲಿಕಾ ವೇದಿಕೆಗಳಿಗೆ ಅಗತ್ಯವಿರುವ ಭಾಷೆ ಮತ್ತು ಎ.ಪಿ.ಐ ಸೇವೆಗಳು ಲಭ್ಯವಿವೆ. ನಮ್ಮನ್ನು ಸಂಪರ್ಕಿಸಿ.
ನಮ್ಮ ಹೆಚ್ಚಿನ ಮತ್ತು ವಿಸ್ತೃತ ಸೇವೆಗಳ ಬಗ್ಗೆ ತಿಳಿಯಲು

ಅಂಕಿ-ಅಂಶ
ಸಂಖ್ಯೆಗಳ ಅಳತೆಯಲ್ಲಿ ಅಕ್ಷರಗಳು.
ಹೆಚ್ಚು ಪದಗಳ ಅನುವಾದ.
ಹೆಚ್ಚಿನ ಬಹುಭಾಷಾ ಪ್ರತಿಲೇಖನ
ಹೆಚ್ಚು ಲೇಖನಗಳ ಬರವಣಿಗೆ.
ಗಣಕೀಕೃತ ಸಂಶ್ಲೇಷಣೆ.
ಧಾರಾವಾಹಿ ಚಿತ್ರ-ಬರವಣಿಗೆ.
ಚಲನಚಿತ್ರಗಳಿಗೆ ಸಂಭಾಷಣೆ ಅನುವಾದ.
ನಮ್ಮ ಗ್ರಾಹಕರು, ಪಾಲುದಾರರು, ಅಕ್ಷರ ಸಂಗಾತಿಗಳು












ಪ್ರಶಂಸೆ
ಕೆಲಸವನ್ನು ಮೆಚ್ಚಿಕೊಂಡವರು







ನಮ್ಮ ವರ್ಡ್ ವೈಸ್ ದೃಶ್ಯಾವಳಿಗೆ ಭೇಟಿಕೊಡಿ
ಭಾರತೀಯ ಭಾಷೆಗಳು, ಭಾಷಾಶಾಸ್ತ್ರ ಮತ್ತು ಭಾಷಾ ತಂತ್ರಜ್ಞಾನದ ಕುರಿತ
ಗಂಭೀರವಾದ, ವಿದ್ವತ್ಪೂರ್ಣವಾದ ವಿಷಯಗಳಿಗಾಗಿ

ಜ್ಞಾನ ಕಲ್ಪನೆ ವಿವೇಕಗಳ
ಅದ್ಭುತ ಓದಿನ ಜಗತ್ತಿಗೆ ಸುಸ್ವಾಗತ
ಭಾರತೀಯ ಭಾಷೆಗಳು, ಭಾಷಾಶಾಸ್ತ್ರ ಮತ್ತು ಭಾಷಾ ತಂತ್ರಜ್ಞಾನದ ಕುರಿತ
ಗಂಭೀರವಾದ, ವಿದ್ವತ್ಪೂರ್ಣವಾದ ವಿಷಯಗಳಿಗಾಗಿ

Language before the Evolution the Language
In a study published in Science Advances, Stuart K. Watson and colleagues investigate the ability of monkeys, apes, and humans to process nonadjacent dependencies in

Addressing the Needs of Multilingual Learners
With globalization, there has been an increasing demand for education systems to accommodate the needs of multilingual learners.

Importance of Preserving India’s Endangered Languages
India is home to a diverse range of languages. The other spectrum of this reality is many of these languages are endangered and at risk

ನೀವು ನಿರ್ದಿಷ್ಟವಾಗಿ ಏನನ್ನಾದರೂ ಹುಡುಕುತ್ತಿದ್ದೀರಾ?

ಸಂಪರ್ಕದಲ್ಲಿರೋಣ
